ಅಬ್ದುಸ್ಸಲಾಂ ಪುತ್ತಿಗೆ
ಪ್ರಧಾನ ಸಂಪಾದಕರು, ವಾರ್ತಾಭಾರತಿ
ಇಸ್ಲಾಮ್ ಧರ್ಮದಲ್ಲಿ ಹಾಗೂ ಮುಸ್ಲಿಂ ಸಮುದಾಯದಲ್ಲಿ ಉದಾರವಾದದ ಒಂದು ದೀರ್ಘ ಹಾಗೂ ಶ್ರೀಮಂತ ಪರಂಪರೆ ಇದೆ. ಆ ಪರಂಪರೆಯಯನ್ನು ಸಮಾಜದಲ್ಲಿ ಪರಿಚಯಿಸಿ, ಮುಸ್ಲಿಂ ಸಮುದಾಯದಲ್ಲಿ ವೈಚಾರಿಕ ವೈಶಾಲ್ಯದ ಸ್ಫೂರ್ತಿಯನ್ನು ಬಲಪಡಿಸುವುದು ಇಂದಿನ ಅಗತ್ಯವಾಗಿದೆ. ತೀರಾ ಸಂಕುಚಿತ, ಉಗ್ರ ಹಾಗೂ ಉದ್ರೇಕಕಾರಿ ಭಾಷೆ ಮಾತನಾಡುವ ಕೆಲವು ಪುರೋಹಿತರು ಹಾಗೂ ಪುಢಾರಿಗಳು ಸದ್ಯ ಮಾಧ್ಯಮಗಳ ಕೃಪೆಯಿಂದ, ಸಂಪೂರ್ಣ ಸಮುದಾಯದ ಅಧಿಕೃತ ವಕ್ತಾರರೆನಿಸಿಕೊಂಡಿದ್ದಾರೆ. ಇದು ನಮ್ಮ ಕಾಲದ ಒಂದು ದೊಡ್ಡ ದುರಂತ. ಇಂತಹ ರೋಗಗ್ರಸ್ತ ವಿಕೃತರನ್ನೆಲ್ಲಾ ಮೂಲೆಗೆ ಸರಿಸಿ, ಪ್ರೀತಿಯ, ಶಾಂತಿಯ, ಸೇವೆಯ, ಸಹತಾಪದ ಮತ್ತು ಸಹಬಾಳ್ವೆಯ ಭಾಷೆ ಮಾತನಾಡುವವರು ಮಾತ್ರವೇ ಇಸ್ಲಾಮ್ ಧರ್ಮ ಅಥವಾ ಮುಸ್ಲಿಂ ಸಮುದಾಯದ ನೈಜ ಪ್ರತಿನಿಧಿಗಳು ಎಂಬುದನ್ನು ಸಮಾಜಕ್ಕೆ ಮನವರಿಕೆ ಮಾಡಿಸುವ ಸವಾಲು ನಮ್ಮ ಮುಂದಿದೆ.
ಹಾಗೆಯೇ, ಮುಸ್ಲಿಂ ಸಮುದಾಯಕ್ಕೆ, ಅದರ ನೈಜ ಆದ್ಯತೆಗಳನ್ನು ನೆನಪಿಸುವ ಕೆಲಸ ಆಗಬೇಕಾಗಿದೆ. ಮುಸ್ಲಿಂ ಜನಸಾಮಾನ್ಯರು ಭಾವನಾತ್ಮಕ ವಿವಾದಗಳ ನೆರೆಯಲ್ಲಿ ಕೊಚ್ಚಿ ಹೋಗದಂತೆ ಮತ್ತು ಶಿಕ್ಷಣ, ಸೇವೆ, ಸಾಹಿತ್ಯ, ಮಾಧ್ಯಮ, ಆಡಳಿತ, ಉದ್ದಿಮೆ ಮುಂತಾದ ವಿವಿಧ ರಂಗಗಳಲ್ಲಿ ಘನತೆಯ, ಗೌರವಾನ್ವಿತ ಬದುಕಿಗೆ ಬೇಕಾದ ಸಕ್ರಿಯ ಹೋರಾಟದಲ್ಲಿ ತೊಡಗುವಂತೆ ಅವರನ್ನು ಸಜ್ಜು ಗೊಳಿಸಬೇಕಾಗಿದೆ.